ವಿಶಾಖಪಟ್ಟಣದ ಆರ್.ಕೆ. ಬೀಚ್ ರಸ್ತೆಯಲ್ಲಿ ನಡೆದ ‘ಅಂತರರಾಷ್ಟ್ರೀಯ ಸಿಟಿ ಪೆರೇಡ್’ನಲ್ಲಿ ಭಾರತೀಯ ನೌಕಾಪಡೆಯು ತನ್ನ ಅದ್ಭುತ ಕಾರ್ಯಾಚರಣಾ ಸಾಮರ್ಥ್ಯವನ್ನು ಅತ್ಯಂತ ಸಮರ್ಥವಾಗಿ ಪ್ರದರ್ಶಿಸಿತು. ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂ 2026 ರ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಸಾವಿರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು, ಐಎಫ್‌ಆರ್-2026 ನೌಕಾ ಸಾಮರ್ಥ್ಯ ಮತ್ತು ತಾಂತ್ರಿಕ ಶ್ರೇಷ್ಠತೆಯ ಅದ್ಭುತ ಪ್ರದರ್ಶನವಾಗಿದೆ. ಈ ಸಿಟಿ ಪೆರೇಡ್ ಮಿಲಿಟರಿ ಶಕ್ತಿಯನ್ನು ನಾಗರಿಕರೊಂದಿಗೆ ಸಂಭ್ರಮಿಸುವ ವೇದಿಕೆಯಾಗಿ ಮಾರ್ಪಡಿಸಿದೆ ಎಂದು ಬಣ್ಣಿಸಿದರು. ಭೂಸೇನೆ, ನೌಕಾಪಡೆ, ವಾಯುಪಡೆ, ಕೋಸ್ಟ್ ಗಾರ್ಡ್ ಮತ್ತು ವಿದೇಶಿ ತಂಡಗಳ ಭಾಗವಹಿಸುವಿಕೆಯು ಅಂತಾರಾಷ್ಟ್ರೀಯ ಸ್ನೇಹ ಮತ್ತು ಏಕತೆಯ ಸಂಕೇತವಾಗಿದೆ ಎಂದು ಅವರು ಶ್ಲಾಘಿಸಿದರು.

