Apr 21, 2026 ,

Stay in the loop

Subscribe to the newsletter for all the latest updates

Error: Contact form not found.

ಕಾರ್ಯಕ್ರಮವನ್ನು ಉದ್ದೇಶಿಸಿ

Table of Content

ವಿಶಾಖಪಟ್ಟಣದ ಆರ್.ಕೆ. ಬೀಚ್ ರಸ್ತೆಯಲ್ಲಿ ನಡೆದ ‘ಅಂತರರಾಷ್ಟ್ರೀಯ ಸಿಟಿ ಪೆರೇಡ್’ನಲ್ಲಿ ಭಾರತೀಯ ನೌಕಾಪಡೆಯು ತನ್ನ ಅದ್ಭುತ ಕಾರ್ಯಾಚರಣಾ ಸಾಮರ್ಥ್ಯವನ್ನು ಅತ್ಯಂತ ಸಮರ್ಥವಾಗಿ ಪ್ರದರ್ಶಿಸಿತು. ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂ 2026 ರ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಸಾವಿರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು, ಐಎಫ್‌ಆರ್-2026 ನೌಕಾ ಸಾಮರ್ಥ್ಯ ಮತ್ತು ತಾಂತ್ರಿಕ ಶ್ರೇಷ್ಠತೆಯ ಅದ್ಭುತ ಪ್ರದರ್ಶನವಾಗಿದೆ. ಈ ಸಿಟಿ ಪೆರೇಡ್ ಮಿಲಿಟರಿ ಶಕ್ತಿಯನ್ನು ನಾಗರಿಕರೊಂದಿಗೆ ಸಂಭ್ರಮಿಸುವ ವೇದಿಕೆಯಾಗಿ ಮಾರ್ಪಡಿಸಿದೆ ಎಂದು ಬಣ್ಣಿಸಿದರು. ಭೂಸೇನೆ, ನೌಕಾಪಡೆ, ವಾಯುಪಡೆ, ಕೋಸ್ಟ್ ಗಾರ್ಡ್ ಮತ್ತು ವಿದೇಶಿ ತಂಡಗಳ ಭಾಗವಹಿಸುವಿಕೆಯು ಅಂತಾರಾಷ್ಟ್ರೀಯ ಸ್ನೇಹ ಮತ್ತು ಏಕತೆಯ ಸಂಕೇತವಾಗಿದೆ ಎಂದು ಅವರು ಶ್ಲಾಘಿಸಿದರು.
ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮಾತನಾಡಿ, ಈ ಪರೇಡ್ ಐಎಫ್‌ಆರ್ ಮತ್ತು ಮಿಲನ್-2026ರ ಪ್ರಮುಖ ಆಕರ್ಷಣೆಯಾಗಿದೆ. ಸುರಕ್ಷಿತ ಮತ್ತು ಮುಕ್ತ ಸಮುದ್ರ ಖಾತರಿಪಡಿಸಲು ಸೌಹಾರ್ದ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತೀಯ ನೌಕಾಪಡೆ ಸದಾ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಕಾರ್ಯಕ್ರಮವು ಚೇತಕ್ ಹೆಲಿಕಾಪ್ಟರ್‌ಗಳ ಬ್ಯಾನರ್ ಹಾರಾಟದೊಂದಿಗೆ ಪ್ರಾರಂಭವಾಯಿತು. ಸಮುದ್ರದಲ್ಲಿ ನಡೆಯುವ ರಕ್ಷಣಾ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆ ಹಾಗೂ ಮಿಗ್-29ಕೆ ಯುದ್ಧ ವಿಮಾನಗಳ ಸಾಹಸಮಯ ಹಾರಾಟ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು.
ಸಶಸ್ತ್ರ ಪಡೆಗಳು ಮತ್ತು ವಿದೇಶಿ ಪ್ರತಿನಿಧಿಗಳ ಶಿಸ್ತುಬದ್ಧ ಪಥಸಂಚಲನವು ಮೆರವಣಿಗೆಗೆ ಮೆರುಗು ನೀಡಿತು. ಎನ್‌ಸಿಸಿ, ಸೀ ಕ್ಯಾಡೆಟ್ ಕಾರ್ಪ್ಸ್ ಮತ್ತು ನೌಕಾಪಡೆ ಶಾಲೆಯ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ವಿಭಾಗದಲ್ಲಿ ಪೂರ್ವ ನೌಕಾ ಕಮಾಂಡ್‌ನ ಕೆಡೆಟ್‌ಗಳಿಂದ ಹಾರ್ನ್‌ಪೈಪ್ ನೃತ್ಯ ಮತ್ತು ಭಾರತದ ಶ್ರೀಮಂತ ಸಮುದ್ರ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಪ್ರದರ್ಶಿಸಲ್ಪಟ್ಟವು.
ಸೂರ್ಯಾಸ್ತದ ನಂತರ, ಸಮುದ್ರದಲ್ಲಿ ಲಂಗರು ಹಾಕಿದ್ದ ನೌಕೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ಸಿಡಿಮದ್ದುಗಳ ಪ್ರದರ್ಶನ, ಲೇಸರ್ ಶೋ ಮತ್ತು ಆಕರ್ಷಕ ಡ್ರೋನ್ ಫಾರ್ಮೇಶನ್‌ಗಳೊಂದಿಗೆ ಈ ಭವ್ಯ ಸಮಾರಂಭವು ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *

Featured Posts

Featured Posts

Lastest News

Featured Posts